ಹಣ ಉಳಿಸುವುದು ಇಷ್ಟೊಂದು ಸುಲಭನಾ!!??

ನಮಸ್ಕಾರ ಸ್ನೇಹಿತರೇ ನನ್ನ ಮತ್ತೊಂದು ಅಂಕಣಕ್ಕೆ ನಿಮ್ಮೆಲ್ಲರಿಗೂ ಸ್ವಾಗತ 🙏🙏
             {ವಿ.ಸೂ. ನಾನು ಹೇಳುವ ಕೆಲವೊಂದು ಮಾತು ಆಗಲಿ ಸಲಹೆಗಳು ಆಗಲಿ ಅವೆಲ್ಲ ನಿಮ್ಮ ನಿಮ್ಮ ವೈಯುಕ್ತಿಕ ಕ್ಕೆ ಬಿಟ್ಟಿದ್ದು ನಿಮ್ಮ ಯೋಚನೆಗಳಿಗೆ ನೀವೇ ಜವಾಬ್ದಾರರು.}

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

  *   ಹೊಲದಲ್ಲಿ ಬೆಳೆಯನ್ನು ಬೆಳೆಯುವುದು ಎಸ್ಟು ಅವಶ್ಯವೋ ಅದಕ್ಕೂ ಮೊದಲು ಬಿತ್ತುವ ಬೀಜವನ್ನು ಸಿದ್ಧ ಮಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ .
       ಅದರಂತೆಯೇ ಹಣವನ್ನು ಬೆಳೆಸುವ ಮೊದಲು ಉಳಿಸುವ ಸುಲಭ ದಾರಿಯನ್ನು ನಾವು ಇಂದಿನ ಅಂಕಣದಲ್ಲಿ ತಿಳಿದುಕೊಳ್ಳೋಣ .
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

 *   2022-23 ರ ಭಾರತೀಯ ಆರ್ಥಿಕ ಸರ್ವೇ ಪ್ರಕಾರ ಸಾಮಾನ್ಯ ಮನುಷ್ಯನಿಂದ ಇಡಿದು ದೊಡ್ಡ ಆಗರ್ಭ ಶ್ರೀಮಂತ ಜನರವರೆಗೆ ಅಂದಾಜಿನಲ್ಲಿ ಪ್ರತಿ ದಿನಕ್ಕೆ ಕನಿಷ್ಟ ₹ 50-100 ರೂ. ಯನ್ನು ಖರ್ಚು ಮಾಡುತ್ತಾನೆ , ಎಂದು ವರದಿ ಇದೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

 *     ಅದರಂತೆಯೇ ನಾವು ಅಂದರೆ ಈ ಅಂಕಣವನ್ನು ಓದುತ್ತಾ ಇರುವವರು , ಆಗರ್ಭ ಶ್ರೀಮಂತರು ಅಲ್ಲ . ಹಾಗೆಯೇ ಕೆಳಮಟ್ಟದ ಸಂಪೂರ್ಣ ಬಡವರು ಅಲ್ಲ . ಮಾಧ್ಯಮ ವರ್ಗದ ಜೀವನವನ್ನು ನಡೆಸುತ್ತಿರುವ ಸಾಮಾನ್ಯ ಜನರು ನಾವು. 

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

*      ಆದ್ದರಿಂದ ನಮ್ಮ ನಿತ್ಯಜೀವನದಲ್ಲಿ ಕನಿಷ್ಟ ಅಂದರೂ ₹20 ರೂ. ಅನಾವಶ್ಯಕವಾಗಿ ಕಳೆಯುತ್ತಿದ್ದೆವೆ. ಅದರ ಬಗ್ಗೆ ನಮಗೆ ಯೋಚನೆ ಇಲ್ಲ .

======================================

        
  ನಮ್ಮ ನಿತ್ಯಜೀವನವನ್ನು ಸರಿ ದೂಗಿಸಿಕೊಂಡು, ಅದರಲ್ಲೂ ದಿನಾಲೂ , ವಾರಕ್ಕೂ , ತಿಂಗಳಿಗೂ , ವರ್ಷಕ್ಕೂ ಹೇಗೆ ಹಣವನ್ನು ಉಳಿಸುವುದು ಎಂದು ಕೆಳಗಿನ ಪಟ್ಟಿಯಿಂದ ತಿಳಿಯುತ್ತಾ ಹೋಗೋಣ . 

======================================


 *        ಮೇಲಿನ ಪಟ್ಟಿಯಿಂದ ತಿಳಿಯುವುದರೇನೆಂದರೆ ನಮ್ಮ ಕೈಯಲ್ಲಿ ದಿನವೂ ಕೇವಲ ₹10 ರೂ. ಉಳಿಸಲು ಸಾದ್ಯ ಆದರೆ ಅದು ಒಂದು ವರ್ಷಕ್ಕೆ ₹3600 ರೂ. ಆಗಿರುತ್ತದೆ .  ₹20 ರೂ. ಉಳಿಸಿದರೆ ವರ್ಷದ ಕೊನೆಯಲ್ಲಿ ₹7200 ರೂ ನಿಮ್ಮ ಬಳಿ ಇರುತ್ತದೆ .

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

*        ಅದರಂತೆಯೇ ₹50 , ₹100 , ಸಾದ್ಯ ಆದರೆ ತಿಂಗಳಿಗೆ , ಹಾಗೂ ಸಂಬಳ ಪಡೆಯುವವರಿಗೆ ₹500 , ₹1000 ರೂ. ಉಳಿಸಲು ಸುಲವಾದರೆ ವರ್ಷದ ಕೊನೆಯಲ್ಲಿ ಒಟ್ಟು ಎಸ್ಟು ಹಣ ಆಗುತ್ತದೆ ಎಂಬುದನ್ನು ಮೇಲಿನ ಪಟ್ಟಿಯಲ್ಲಿ ನೀವೇ ಮತ್ತೊಮ್ಮೆ ನೋಡಿ 
           ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

 *       ಇಂದಿನ ದಿನಮಾನಗಳಲ್ಲಿ, ಕೇವಲ ₹10 , 20 , 50 , 100 . ರೂ ಉಳಿಸುವುದು ಏನೂ ಅತಿ ದೊಡ್ಡ ಕೆಲಸವಲ್ಲ ಅಲ್ಲದ ವಿಷಯ.
          ಅದೆಲ್ಲಾ ಸರಿ ಅಷ್ಟೆಲ್ಲಾ ಹಣವನ್ನು ನಾವು ಕಂಡುಕೊಳ್ಳುವ ಮೊದಲು ಚಾಚೂ ತಪ್ಪದೆ ದಿನಾಲೂ ನಾವು ಅಂದುಕೊಂಡಷ್ಟು ಹಣವನ್ನು ಉಳಿಸಬೇಕು .

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
       
*      ಹಾಗಾದರೆ ನಾನು ಹಣವನ್ನು ಪ್ರತಿದಿನ ಉಳಿಸಲು [ಉದಾ.₹10,20,50,100] ಸಿದ್ದನಿದ್ದೇನೆ . ಆದರೆ ಆ ಹಣವನ್ನು ತನ್ನ ಬ್ಯಾಂಕ್ ಅಲ್ಲಿ ಇಟ್ಟರೆ ನಾನು ಮತ್ತೆ ತನ್ನ ಖರ್ಚಿಗಾಗಿ ಬಿಡಿಸಿ ಬಳಸಿಕೊಂಡು ಬಿಡುವೆ , ಅದನ್ನು ನಾನು ಬಳಸದೆ , ಉಳಿಸುವುದು ಹೇಗೆ ? ಮತ್ತು ಅದನ್ನು ಎಲ್ಲಿ ಇಡುವುದು ? ಎಲ್ಲಿಯವರೆಗೆ ಇಡುವುದು ? ಈ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ . ನನ್ನಲ್ಲಿ , ನಾನು ಕೆಲವೊಂದು ಪುಸ್ತಕಗಳನ್ನು ಓದಿ ತಿಳಿದುಕೊಂಡಿರುವ ಕೆಲವು ರಹಸ್ಯಗಳನ್ನು ಖಂಡಿತವಾಗಿಯೂ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ ಅಡಕೆ ನೀವು ಏನೂ ಮಾಡಬೇಕು ? ನೀವೇನು ಮಾಡಬೇಕು ಅಂದ್ರೆ ನನ್ನ ಮುಂದಿನ ಅಂಕಣ ಕ್ಕಾಗಿ ಕಾಯಬೇಕು . 

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~


 .......................ಧನ್ಯವಾದಗಳು...........................

           

3 ಕಾಮೆಂಟ್‌ಗಳು:

ವಿದ್ಯಾಸಿರಿ ಉಚಿತ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ-- 2024

ವಿದ್ಯಾ ಸಿರಿ ವಿದ್ಯಾರ್ಥಿ ವೇತನ 2024. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರತಿವರ್ಷದಂತೆ ಈ ವರ್ಷವೂ ಅಂದರೆ 2024 ಮತ್ತು 25ನೇ ಸಾಲಿನ ವಿದ್ಯಾರ್ಥಿ ವೇ...