ಹಣವನ್ನು ಖರ್ಚು ಮಾಡುವ ಸುಲಭ ದಾರಿಗಳು

ಸ್ನೇಹಿತರೇ ನನ್ನ ಮತ್ತೊಂದು ಅಂಕಣಕ್ಕೆ ನಿಮ್ಮೆಲ್ಲರಿಗೂ ಸ್ವಾಗತ
ಹಿಂದಿನ ಅಂಕಣದಲ್ಲಿ ವೈಯಕ್ತಿಕ ಹಣಕಾಸಿನ ಬಗ್ಗೆ ಬರೆದಿದ್ದ ನಾನು ಈಗ ಈ ಅಂಕಣದಲ್ಲಿ ನಾವು 95% ರಷ್ಟು ಜನರಲ್ಲಿ ಉಳಿದು ಎಲ್ಲರಂತೆ ಕುರಿ ಆಗುವುದಕ್ಕಿಂತ 5% ರಷ್ಟು ಜನರಲ್ಲಿ ಆ ಕುರಿಗಳನ್ನು ಕಾಯುವವರು ಆದರೆ ಹೇಗೆ? ಅದರಂತೆ ನಾವು ಹಣವನ್ನು ಉಳಿಸುವ , ಬೆಳೆಸುವ ಮಾರ್ಗಗಳನ್ನು ತಿಳಿದುಕೊಳ್ಳುವ ಮೊದಲು , ಆ ಹಣವನ್ನು ಹಾಳುಮಾಡುವ ಕೆಲವು ಅಂಶಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ . ಹಾಗಾಗಿ ಇದರಲ್ಲಿ ಹಣ ಉಳಿಸುವ ನಾವು ಮಾಡುವ ತಪ್ಪುಗಳನ್ನು ಅಥವಾ ಹಣವನ್ನು ಖರ್ಚು ಮಾಡುವ ದಾರಿಗಳ ಬಗ್ಗೆ ತಿಳಿದುಕೊಳ್ಳೋಣ ಹಾಗಾದರೆ ಆ ಹಣವನ್ನು ಖರ್ಚು ಮಾಡುವ ದಾರಿಗಳು ಯಾವುವು ಎಂದು ನೊಡೋಣ



 1] ....ಹಣವನ್ನು ಉಳಿಸುವುದರ ಬಗ್ಗೆ ಗಮನ ಕೊಡದೇ ಇರುವುದು
ಹೌದು ಇದು ಕೂಡ ಒಂದು ಹಣ ಖರ್ಚು ಮಾಡುವ ಸುಲಭ ದಾರಿ ಆಗಿದೆ 

 2]....ಹಣದ ಬಗ್ಗೆ ತಪ್ಪಾಗಿ ಯೋಚಿಸುವುದು
ಹಣವನ್ನು ನಮ್ಮ ಕೈಯಿಂದ ಉಳಿಸಿ ಬೆಳೆಸಲು ಸಾದ್ಯವಿಲ್ಲ . ಅದೆಲ್ಲಾ ಶ್ರೀಮಂತರಿಗೆ ಮಾತ್ರ ಸಾಧ್ಯ ಎಂದು ಭಾವಿಸುವುದು . ಒಂದು ಮಾತು ಎನ್ ಅಂದ್ರೆ ಈ ಭೂಮಿ ಮೇಲೆ ಯಾರು ಶ್ರೀಮಂತರು ಇಲ್ಲ , ಹಾಗೂ ಯಾರು ಬಡವರು ಇಲ್ಲ . ಅವರವರು ಮಾಡುವ ಕೆಲಸಗಳ ಮೇಲೆ ಅವರವರ ಸ್ಥಾನ ನಿರ್ಧಾರ ಆಗುತ್ತದೆ . 


 3] .... ಸಾಮರ್ಥ್ಯಕ್ಕಿಂತ ಹೆಚ್ಚು ಸಾಲ ಪಡೆಯುವುದು.
ಉದಾಹರಣೆ ; ನಮಗೆ 500 ರೂ. ಅವಶ್ಯಕತೆ ಇರುತ್ತದೆ, ಆದರೆ ನಾವು ಸಾಲ ಪಡೆಯುವಾಗ 1000 ರೂ. ಪಡೆಯುತ್ತೇವೆ . ಆಗೂ ಹೆಚ್ಚಿನ 500 ರೂ. ಅನಾವಶ್ಯವಾಗಿ ಖರ್ಚು ಮಾಡುವುದು. 



 4]....ಆದಾಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುವುದು.
ಉದಾಹರಣೆ ; ನಮಗೆ ಮಾಸಿಕವಾಗಿ 15,000 ರೂ. ಬರುತ್ತದೆ ಎಂದರೆ, ನಾನು ಸಾಲ ಕಟ್ಟುತ್ತೇನೆ, ಕಟ್ಟುತ್ತೇನೆ ಎಂದು , ಹೇಳಿ 15,0000 ರೂ. ಕ್ಕಿಂತಲೂ ಹೆಚ್ಚು ಸಾಮಾಗರಿ ಅಥವಾ ಇನ್ನಿತರ ಕೆಲಸಕ್ಕೆ ಉಪಯೋಗಿಸುವುದು.



 5]....ಹಣ ಹೂಡಿಕೆಯ ಬಗ್ಗೆ ತಿಳಿಯದೆ ಇರುವುದು.
ಹೌದು, ಹಣವನ್ನು ಬರೀ ಖರ್ಚು ಮಾಡುತ್ತಾ ನಾಳೆಯೋ ನಾಡಿದೋ ಉಳಿಸಿದರೆ ಆಯಿತು ಎಂದುಕೊಂಡು ಇಂದು ಹಣ ಖರ್ಚು ಮಾಡುವುದು , ಆದರೆ ಇಂದೇ ಖರ್ಚು ಮಾಡಿದರೆ ನಾಳೆ, ನಾಡಿದ್ದು ಹಣ ಉಳಿಯುವುದೇ ಇಲ್ಲ ಎಂದು ಯೋಚಿಸುವುದೇ ಇರುವುದು.

ನಿಮ್ಮ. ಯಾವುದೇ ಸಲಹೆಯನ್ನು ನೀಡುವುದಾದರೆ ದಯವಿಟ್ಟು ನೀಡಿ ನಿಮ್ಮ ಮಾತಿಗೆ ಕಾಯ್ತಾ ಇರುತ್ತೇನೆ.

         ................... ಧನ್ಯವಾದಗಳು...............

1 ಕಾಮೆಂಟ್‌:

ವಿದ್ಯಾಸಿರಿ ಉಚಿತ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ-- 2024

ವಿದ್ಯಾ ಸಿರಿ ವಿದ್ಯಾರ್ಥಿ ವೇತನ 2024. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರತಿವರ್ಷದಂತೆ ಈ ವರ್ಷವೂ ಅಂದರೆ 2024 ಮತ್ತು 25ನೇ ಸಾಲಿನ ವಿದ್ಯಾರ್ಥಿ ವೇ...