ಹಣ ಉಳಿಸುವುದು ಇಷ್ಟೊಂದು ಸುಲಭನಾ!!??

ನಮಸ್ಕಾರ ಸ್ನೇಹಿತರೇ ನನ್ನ ಮತ್ತೊಂದು ಅಂಕಣಕ್ಕೆ ನಿಮ್ಮೆಲ್ಲರಿಗೂ ಸ್ವಾಗತ 🙏🙏
             {ವಿ.ಸೂ. ನಾನು ಹೇಳುವ ಕೆಲವೊಂದು ಮಾತು ಆಗಲಿ ಸಲಹೆಗಳು ಆಗಲಿ ಅವೆಲ್ಲ ನಿಮ್ಮ ನಿಮ್ಮ ವೈಯುಕ್ತಿಕ ಕ್ಕೆ ಬಿಟ್ಟಿದ್ದು ನಿಮ್ಮ ಯೋಚನೆಗಳಿಗೆ ನೀವೇ ಜವಾಬ್ದಾರರು.}

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

  *   ಹೊಲದಲ್ಲಿ ಬೆಳೆಯನ್ನು ಬೆಳೆಯುವುದು ಎಸ್ಟು ಅವಶ್ಯವೋ ಅದಕ್ಕೂ ಮೊದಲು ಬಿತ್ತುವ ಬೀಜವನ್ನು ಸಿದ್ಧ ಮಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ .
       ಅದರಂತೆಯೇ ಹಣವನ್ನು ಬೆಳೆಸುವ ಮೊದಲು ಉಳಿಸುವ ಸುಲಭ ದಾರಿಯನ್ನು ನಾವು ಇಂದಿನ ಅಂಕಣದಲ್ಲಿ ತಿಳಿದುಕೊಳ್ಳೋಣ .
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

 *   2022-23 ರ ಭಾರತೀಯ ಆರ್ಥಿಕ ಸರ್ವೇ ಪ್ರಕಾರ ಸಾಮಾನ್ಯ ಮನುಷ್ಯನಿಂದ ಇಡಿದು ದೊಡ್ಡ ಆಗರ್ಭ ಶ್ರೀಮಂತ ಜನರವರೆಗೆ ಅಂದಾಜಿನಲ್ಲಿ ಪ್ರತಿ ದಿನಕ್ಕೆ ಕನಿಷ್ಟ ₹ 50-100 ರೂ. ಯನ್ನು ಖರ್ಚು ಮಾಡುತ್ತಾನೆ , ಎಂದು ವರದಿ ಇದೆ.
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

 *     ಅದರಂತೆಯೇ ನಾವು ಅಂದರೆ ಈ ಅಂಕಣವನ್ನು ಓದುತ್ತಾ ಇರುವವರು , ಆಗರ್ಭ ಶ್ರೀಮಂತರು ಅಲ್ಲ . ಹಾಗೆಯೇ ಕೆಳಮಟ್ಟದ ಸಂಪೂರ್ಣ ಬಡವರು ಅಲ್ಲ . ಮಾಧ್ಯಮ ವರ್ಗದ ಜೀವನವನ್ನು ನಡೆಸುತ್ತಿರುವ ಸಾಮಾನ್ಯ ಜನರು ನಾವು. 

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

*      ಆದ್ದರಿಂದ ನಮ್ಮ ನಿತ್ಯಜೀವನದಲ್ಲಿ ಕನಿಷ್ಟ ಅಂದರೂ ₹20 ರೂ. ಅನಾವಶ್ಯಕವಾಗಿ ಕಳೆಯುತ್ತಿದ್ದೆವೆ. ಅದರ ಬಗ್ಗೆ ನಮಗೆ ಯೋಚನೆ ಇಲ್ಲ .

======================================

        
  ನಮ್ಮ ನಿತ್ಯಜೀವನವನ್ನು ಸರಿ ದೂಗಿಸಿಕೊಂಡು, ಅದರಲ್ಲೂ ದಿನಾಲೂ , ವಾರಕ್ಕೂ , ತಿಂಗಳಿಗೂ , ವರ್ಷಕ್ಕೂ ಹೇಗೆ ಹಣವನ್ನು ಉಳಿಸುವುದು ಎಂದು ಕೆಳಗಿನ ಪಟ್ಟಿಯಿಂದ ತಿಳಿಯುತ್ತಾ ಹೋಗೋಣ . 

======================================


 *        ಮೇಲಿನ ಪಟ್ಟಿಯಿಂದ ತಿಳಿಯುವುದರೇನೆಂದರೆ ನಮ್ಮ ಕೈಯಲ್ಲಿ ದಿನವೂ ಕೇವಲ ₹10 ರೂ. ಉಳಿಸಲು ಸಾದ್ಯ ಆದರೆ ಅದು ಒಂದು ವರ್ಷಕ್ಕೆ ₹3600 ರೂ. ಆಗಿರುತ್ತದೆ .  ₹20 ರೂ. ಉಳಿಸಿದರೆ ವರ್ಷದ ಕೊನೆಯಲ್ಲಿ ₹7200 ರೂ ನಿಮ್ಮ ಬಳಿ ಇರುತ್ತದೆ .

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

*        ಅದರಂತೆಯೇ ₹50 , ₹100 , ಸಾದ್ಯ ಆದರೆ ತಿಂಗಳಿಗೆ , ಹಾಗೂ ಸಂಬಳ ಪಡೆಯುವವರಿಗೆ ₹500 , ₹1000 ರೂ. ಉಳಿಸಲು ಸುಲವಾದರೆ ವರ್ಷದ ಕೊನೆಯಲ್ಲಿ ಒಟ್ಟು ಎಸ್ಟು ಹಣ ಆಗುತ್ತದೆ ಎಂಬುದನ್ನು ಮೇಲಿನ ಪಟ್ಟಿಯಲ್ಲಿ ನೀವೇ ಮತ್ತೊಮ್ಮೆ ನೋಡಿ 
           ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

 *       ಇಂದಿನ ದಿನಮಾನಗಳಲ್ಲಿ, ಕೇವಲ ₹10 , 20 , 50 , 100 . ರೂ ಉಳಿಸುವುದು ಏನೂ ಅತಿ ದೊಡ್ಡ ಕೆಲಸವಲ್ಲ ಅಲ್ಲದ ವಿಷಯ.
          ಅದೆಲ್ಲಾ ಸರಿ ಅಷ್ಟೆಲ್ಲಾ ಹಣವನ್ನು ನಾವು ಕಂಡುಕೊಳ್ಳುವ ಮೊದಲು ಚಾಚೂ ತಪ್ಪದೆ ದಿನಾಲೂ ನಾವು ಅಂದುಕೊಂಡಷ್ಟು ಹಣವನ್ನು ಉಳಿಸಬೇಕು .

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
       
*      ಹಾಗಾದರೆ ನಾನು ಹಣವನ್ನು ಪ್ರತಿದಿನ ಉಳಿಸಲು [ಉದಾ.₹10,20,50,100] ಸಿದ್ದನಿದ್ದೇನೆ . ಆದರೆ ಆ ಹಣವನ್ನು ತನ್ನ ಬ್ಯಾಂಕ್ ಅಲ್ಲಿ ಇಟ್ಟರೆ ನಾನು ಮತ್ತೆ ತನ್ನ ಖರ್ಚಿಗಾಗಿ ಬಿಡಿಸಿ ಬಳಸಿಕೊಂಡು ಬಿಡುವೆ , ಅದನ್ನು ನಾನು ಬಳಸದೆ , ಉಳಿಸುವುದು ಹೇಗೆ ? ಮತ್ತು ಅದನ್ನು ಎಲ್ಲಿ ಇಡುವುದು ? ಎಲ್ಲಿಯವರೆಗೆ ಇಡುವುದು ? ಈ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ . ನನ್ನಲ್ಲಿ , ನಾನು ಕೆಲವೊಂದು ಪುಸ್ತಕಗಳನ್ನು ಓದಿ ತಿಳಿದುಕೊಂಡಿರುವ ಕೆಲವು ರಹಸ್ಯಗಳನ್ನು ಖಂಡಿತವಾಗಿಯೂ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ ಅಡಕೆ ನೀವು ಏನೂ ಮಾಡಬೇಕು ? ನೀವೇನು ಮಾಡಬೇಕು ಅಂದ್ರೆ ನನ್ನ ಮುಂದಿನ ಅಂಕಣ ಕ್ಕಾಗಿ ಕಾಯಬೇಕು . 

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~


 .......................ಧನ್ಯವಾದಗಳು...........................

           

ಹಣವನ್ನೂ ಉಳಿಸಲು ಮಾಡಬೇಕಾದ ಕರ್ತವ್ಯ . @dinesh468.blogspot.com



ನಮಸ್ಕಾರ ಸ್ನೇಹಿತರೇ .~ 
ಮೊದಲನೆಯದಾಗಿ ನನ್ನ ಎಲ್ಲಾ ಸ್ನೇಹಿತರಿಗೆ ದೀಪಗಳ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು 
ನಾನು ನಿಮ್ಮ ದಿನೇಶ್ ಹಿಂದಿನ ಅಂಕಣದಲ್ಲಿ ನಾವು ಹಣವನ್ನು ಹೇಗೆ ಖರ್ಚು ಮಾಡುವುದು ಎಂಬುದರ ಬಗ್ಗೆ ತಿಳಿದುಕೊಂಡೆವು.
          ಎಲ್ಲ ಸರಿ ಹಣವನ್ನು ಕೂಡಿಡುವ ಬಗ್ಗೆ ಹೇಳೋದು ಬಿಟ್ಟು ಹಣವನ್ನು ಖರ್ಚು ಮಾಡುವ ಬಗ್ಗೆ ಹಿಂದಿನ ಅಂಕಣದಲ್ಲಿ  ಹೇಳಿದೆ ಎಂದರೆ, ಉಳಿಸುವ ಮೊದಲು ಗಳಿಸು ಎನ್ನುವ ಮಾತಿದೆ , ಆದರೆ ಈಗಿನ ಪರಿಸ್ಥಿತಿ ಯಲ್ಲಿ ಉಳಿಸುವುದು ಇರಲಿ ಗಳಿಸುವುದಕ್ಕೆ ದಾರಿ ಇಲ್ಲದಂತಾಗಿದೆ .


ಹಣವನ್ನು ಉಳಿಸುವುದು ಬೇಡ , ಗಳಿಸುವುದು ಬೇಡ ,ಹಾಗಾದರೆ ಏನು ಮಾಡಬೇಕು ? . 
ಹಣವನ್ನು ನಾವು ಬೆಳೆಸುವ ಗುಣವನ್ನೂ ಕಲಿಯಬೇಕು , ಇದೇನು ಗಿಡನಾ ನೆಟ್ಟರೆ ಬೆಳೆಯುವುದಕ್ಕೆ ಎಂದು ಕೊಳ್ಳುತ್ತಿದ್ದಿರಾ ?.

ಎಲ್ಲಿ ? ಯಾವಾಗ ? ಏಷ್ಟು ? ಹಣವನ್ನು ಖರ್ಚು ಮಾಡಬೇಕು & ಉಳಿಸಬೇಕು ಎಂದು ತಿಳಿದುಕೊಂಡರೆ ಹಣವನ್ನು ಬೆಳೆಸುವ ದಾರಿ ಸುಗಮವಾಗುತ್ತದೆ.

ಹೌದು ಹಣವನ್ನು ಬೆಳೆಸುವ ಆ ಗುಣಗಳ ಬಗ್ಗೆ ಯೇ ನನ್ನ ಇಂದಿನ ಅಂಕಣ~~~~~~~~~~~~~~~~~


* ಹೌದ ಹಾಗಾದರೆ ಹಣವನ್ನು ಬೆಳೆಸಲು ಸಹ ದಾರಿಗಳು ಇದ್ದಾವೆಯೇ, 
ಹಾಗಾದರೆ ಆ ಹಣದ ಗುಣಗಳು ಯಾವುವು???????

~~~~~~~~~~~~~~~~~~~~~~~~~~~~~~~

* ಹಣವನ್ನು ಬೆಳೆಸುವುದಕ್ಕೆ ಇಂದಿನ ಕಾಲದಲ್ಲಿ ತುಂಬಾ ರೀತಿಯಲ್ಲಿ, ಅವರವರ ಅನುಕೂಲಕ್ಕಾಗಿ, ಅವರವರ ತಾಲ್ಮೆಗಾಗಿ , ಅವರವರ ಕಲಿಕೆಯ ಆಧಾರದ ಮೇಲೆ , ಅವರವರ ಪರಿಸ್ಥಿತಿಯ ಯೋಗ್ಯತೆಯ ಆಧಾರದ ಮೇಲೆ , ಕೆಲವೊಂದು ಗುಣಮಟ್ಟದ ಉಪಯುಕ್ತವಾದ ,ಉತ್ತಮ ರೀತಿಯಲ್ಲಿ ಹಣವನ್ನು ಉಳಿಸುವುದರ ಜೊತೆಗೆ ಅದನ್ನು ಬೆಳೆಸಲು ಸಹಕಾರಿಯಾಗಿವೆ.

~~~~~~~~~~~~~~~~~~~~~~~~~~~~~~~

* ನಮ್ಮ ನಿಮ್ಮೆಲ್ಲರ ಮುತ್ತಜ್ಜ/ಮುತ್ತಜ್ಜಿ ಅವರ ಕಾಲದಲ್ಲಿ ಹಣವನ್ನು ಬೆಳೆಸುವ ದಾರಿಯನ್ನು ಅವರೂ ಕೂಡಾ ಕಂಡು ಕೊಂಡಿದ್ದರು.
         
             ಅದು ಯಾವ ರೀತಿಯಲ್ಲಿ ಅಂದರೆ ತಮ್ಮಲ್ಲಿದ್ದ ಹಣವನ್ನು ಬೇರೆಯವರಿಗೆ ಸಾಲದ ರೂಪದಲ್ಲಿ , ಆಗಲಿ, ಅಥಾವ ಜಮೀನುಗಳನ್ನು ಕೊಳ್ಳುವುದು ಆಗಲಿ ಅಥವಾ ಬಂಗಾರದ ರೂಪದಲ್ಲಿ ಆಗಲಿ ಮತ್ತು ಮಡಕೆಗಳಲ್ಲಿ ಹಾಕಿ ಮಣ್ಣಿನಲ್ಲಿ ಹೂತಿದುವುದರ ರೂಪದಲ್ಲಿ ಹಣವನ್ನು ಉಳಿಸುವ ಕಲೆ ತಿಳಿದಿತ್ತು ಅವರಿಗೆ.


*  ಇವುಗಳಲ್ಲಿ ಕೆಲವೊಂದು ದಾರಿಗಳು ಹಣವನ್ನು ಬೇಳೆಸದೇ ಇರಬಹುದು ಆದರೆ ತಾವು ಹಾಕಿದ ಅಥವಾ ಕೂಡಿಟ್ಟ ಹಣವಂತೂ ಸುರಕ್ಷಿತವಾಗಿ ಇರುತ್ತಿತ್ತು.
* ಆದರೆ ನಮ್ಮ ದೃಷ್ಟಿ ಹಣವನ್ನು ಸುರಕ್ಷಿತವಾಗಿ ಇಡುವುದರ ಜೊತೆಗೆ ಅದನ್ನು ಬೆಳೆಸುವುದಾಗಿದೆ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~


*ಆದರೆ ಇಂದಿನ ದಿನಮಾನಗಳಲ್ಲಿ ನಾವು ನಾವು ಕೂಡಿಡುವ ಹಣ ಬ್ಯಾಂಕ್ ಗಳಲ್ಲಿ ಇದೆ . ಆ ಬ್ಯಾಂಕ್ ಗಳಲ್ಲಿರುವ ಹಣ scan & pay ರೂಪದಲ್ಲಿ ನಿಮ್ಮ ಮೊಬೈಲ್ ಅಲ್ಲಿ ಅಡಕವಾಗಿದೆ. 
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

* ಮುಂದೆ ಉಳಿಸುವ  ಗುಣವಾದರೆ ಹಿಂದೆ ಕಳೆಯುವ ಗುಣ ಮತ್ತೆ ಇನ್ನೇಲ್ಲಿ ಬರಬೇಕು ಆ ಹಣವನ್ನು ಉಳಿಸುವ ಗುಣ .
       [ ಜನರು ಕೈಯಲ್ಲಿ ನೋಟ್ ಗಳ ರೂಪದಲ್ಲಿ ಹಣವನ್ನು ಖರ್ಚು ಮಾಡುವುದಕ್ಕಿಂತ scan & pay ಮೂಲಕ ಆನ್ಲೈನ್ ಪಾವತಿ ಮೂಲಕ ಹೆಚ್ಚು ಖರ್ಚು ಮಾಡ್ತಾ ಇದಾರೆ ಎಂದು ಭಾರತದ ಆರ್ಥಿಕ  2022/2023 ರ ಹಣಕಾಸಿನ ವರ್ಷದಲ್ಲಿ ವರದಿ ಮಾಡಿವೆ .]

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

* ಓದುತ್ತಾ ಓದುತ್ತಾ ಇವ ಏನ್ರೀ ಬರೀ ಪುರಾಣ ಹೇಳ್ತಾ ಇದಾನೆ ಅಂತ ಅಂದುಕೊಳ್ತ ಇದೀರಾ . ಕೇವಲ ನಾನು ಬರೆಯುವುದನ್ನು ಓದುವ ಗುಣ ನಿಮ್ಮಲ್ಲಿ ಇಲ್ಲ ಅಂದರೆ , ಇನ್ನೆಲ್ಲಿ ಬರಬೇಕು ನಿಮ್ಮ ಹತ್ರ ಹಣವನ್ನು ಬೆಳೆಸುವ ಗುಣ .    

"ಒಂದು ಮಾತು ಮಾತ್ರ ನೆನಪಿನಲ್ಲಿಡಿ ಯಾವುದೇ ಕಾಲಕ್ಕೂ, ಯಾವುದೇ ಪರಿಸ್ಥಿತಿಗೂ, ಯಾವುದೇ ಕಾರಣಕ್ಕೂ ಹಣ ಯಾವಾಗಲೂ ಯಾರ ಹತ್ರ ತಾಳ್ಮೆ ಇರುತ್ತದೆಯೋ ಅವರ ಬಳಿಯೇ ಬರೋದು ಮತ್ತು ಬೆಳೆಯೋದು " .

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

* ಹಾಗಾದರೆ ಎನ್ನು ಯಾಕೆ ತಡ ಮಾಡೋದು ಹಣವನ್ನು ಉಳಿಸಿ ಬೆಳೆಸುವ ಸುಲಭ ಮಾರ್ಗಗಳನ್ನು ತಿಳಿಯುತ್ತಾ ಹೋಗೋಣ.~~~~~~~~~~~~~~
~~~~~~~~~~~~~~~~~~~~~~~~~~~~~~~~~~~~~~~~~~~~~~~~~
~~~~~~~~~~~~~~~~~~~~~~~~~~~~~~~~~~~~~~~~~~~~~~~~~
~~~~~~~~~~~~~~~~~~~~~~~~~~~~~~~~~~~~~~~~~~~~~~~~~
~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಹಣವನ್ನೂ ಉಳಿಸಿ ಬೆಳೆಸುವ ದಾರಿಗಳನ್ನು ತಿಳಿದುಕೊಳ್ಳಲು ನೀವು ನನ್ನ ಮುಂದಿನ ಅಂಕಣಕ್ಕಾಗಿ ಕಾಯಬೇಕಾಗುತ್ತದೆ.       


   ....... ..... ........ಧನ್ಯವಾದಗಳು..................



ವಿದ್ಯಾಸಿರಿ ಉಚಿತ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ-- 2024

ವಿದ್ಯಾ ಸಿರಿ ವಿದ್ಯಾರ್ಥಿ ವೇತನ 2024. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರತಿವರ್ಷದಂತೆ ಈ ವರ್ಷವೂ ಅಂದರೆ 2024 ಮತ್ತು 25ನೇ ಸಾಲಿನ ವಿದ್ಯಾರ್ಥಿ ವೇ...